ಸಾಲಗಾರ್ತಿ ಕ್ರೌರ್ಯಕ್ಕೆ ನೊಂದ ರೈತ ಆತ್ಮಹತ್ಯೆಸಾಲ ಮರಳಿಸಲಿಲ್ಲ ಎಂಬ ಕಾರಣಕ್ಕೆ ಪತ್ನಿ, ಪುತ್ರನೊಂದಿಗೆ ತನ್ನನ್ನು ಅನ್ನ, ನೀರು ನೀಡದೇ ಸಾಲ ನೀಡಿದ ಮಹಿಳೆಯು ಗೃಹಬಂಧನದಲ್ಲಿ ಇಟ್ಟಿದ್ದಕ್ಕೆ ಮನನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ.