ಜಾತ್ರೆಯಲ್ಲಿ ಪ್ರಸಾದ ಸೇವನೆ: ಮತ್ತೆ 6 ಜನರಿಗೆ ಸಮಸ್ಯೆಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬೀರೇಶ್ವರ ಜಾತ್ರೆ ಹಾಗೂ ಎಕ್ಕೇರಿ ಕರೆಮ್ಮಾ ದೇವಿಯ ಜಾತ್ರೆಯಲ್ಲಿ ಪ್ರಸಾದ ಸೇವನೆಯಿಂದ ಅಸ್ವಸ್ಥತಗೊಂಡಿರುವ ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಗುರುವಾರ ಮತ್ತೆ 6 ಜನರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.