ಬಸ್ ಬಿಡಲು ವಿದ್ಯಾರ್ಥಿಗಳ ಮನವಿಮೂಡಲಗಿ: ತಾಲೂಕಿನ ತಿಗಡಿ ಗ್ರಾಮಕ್ಕೆ ಸಮರ್ಪಕ ಬಸ್ ಸಂಚಾರಕ್ಕೆ ಆಗ್ರಹಿಸಿ ಗೋಕಾಕ್ ಬಸ್ ನಿಲ್ದಾಣದ ನಿಲ್ದಾಧಿಕಾರಿ ಕೆ.ವಿ.ಜಮಾದಾರ್‌ಗೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗೋಕಾಕ ನಗರದ ಕಾಲೇಜುಗಳಿಗೆ ತಿಗಡಿ, ಸುಣಧೋಳಿ, ತಳಕಟ್ನಾಳ, ಕಂಡರಟ್ಟಿ ತೋಟದ ಸುಮಾರು 60 ರಿಂದ 70 ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೋಗುತ್ತಾರೆ.