ಯರಗಟ್ಟಿ ಉಪಪೊಲೀಸ್ ಠಾಣೆಗಿಲ್ಲ ಮೇಲ್ದರ್ಜೇಯ ಭಾಗ್ಯಕನ್ನಡಪ್ರಭ ವಾರ್ತೆ ಯರಗಟ್ಟಿ ತಾಲೂಕು ಕೇಂದ್ರವಾಗಿ 3 ವರ್ಷಗಳು ಕಳೆದರೂ ಯರಗಟ್ಟಿ ಉಪಪೊಲೀಸ್ ಠಾಣೆಯು ಮೇಲ್ದರ್ಜೆಗೆ ಏರುವ ಭಾಗ್ಯ ಮಾತ್ರ ಇನ್ನೂ ಕೂಡಿ ಬಂದಿಲ್ಲ. ಯರಗಟ್ಟಿ ಪಟ್ಟಣವು ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಪಟ್ಟಣದ ವ್ಯಾಪ್ತಿಯ ವಾಸಿಸುವ ಜನರ ಸಂಖ್ಯೆ ಹೆಚ್ಚಿದೆ. ಅಲ್ಲದೇ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಸಂಖ್ಯೆಯೂ ಹೆಚ್ಚಿದೆ. ಸುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳು ಯರಗಟ್ಟಿ ಠಾಣೆಯ ವ್ಯಾಪ್ತಿಗೆ ಬರುತ್ತಿದ್ದು, ಪಟ್ಟಣಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಅಗತ್ಯವಿದೆ.