ಪಕ್ಷಿಗಳ ನೀರಿನ ದಾಹ ತಣಿಸುತ್ತಿರುವ ಖಾಕಿಬೇಸಿಗೆ ಪ್ರಖರತೆ ಹೆಚ್ಚಾಗುತ್ತಿದೆ. ಇದರಿಂದ ಪ್ರಾಣಿ, ಪಕ್ಷಿಗಳು ತಾಪಮಾನದ ಹೊಡೆತಕ್ಕೆ ಹೈರಾಣಾಗಿವೆ. ನೀರಿನ ಕೊರತೆಯಿಂದ ಮೂಕ ಪಕ್ಷಿಗಳ ಪ್ರಾಣಕ್ಕೆ ಸಂಚಕಾರ ಬಾರದಿರಲೆಂದು ಮತ್ತು ಅವುಗಳ ದಾಹವನ್ನು ತೀರಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಬೆಳಗಾವಿ ಜಿಲ್ಲಾ ಪೊಲೀಸರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.