ಡಿಸಿ ಕಚೇರಿಗೆ ರೈತರ ನುಗ್ಗಲೆತ್ನ: ನೂಕಾಟ, ತಳ್ಳಾಟರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಸಾಲಮನ್ನಾ ಮಾಡುವುದು ಹಾಗೂ ಸಾಲವಸೂಲಾತಿ ಮಾಡುವುದನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ರೈತರು ನಡೆಸುತ್ತಿದ್ದ ಪ್ರತಿಭಟನೆ ಅತಿರೇಕಕ್ಕೆ ಹೋಯಿತು. ಅಲ್ಲದೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯ ನೂಕಾಟ, ತಳ್ಳಾಟ ಕೂಡ ನಡೆಯಿತು.