ಜಗತ್ತೇ ತಿರುಗಿ ನೋಡುವಂತ ಪವಿತ್ರ ನೆಲ ನಮ್ಮದುಬೈಲಹೊಂಗಲ: ಮಹಾರಾಣಿ ಎಂದಾಕ್ಷಣ ಯುರೋಪ್ ರಾಷ್ಟ್ರಗಳಲ್ಲಿ ಕಿರೀಟ ತೊಟ್ಟು ಅರಮನೆಯಲ್ಲಿ ವೈಭೋಗದಿಂದ ಸಿಂಹಾಸನದ ಮೇಲೆ ಕುಳಿತಿರುವವಳು ಎಂಬ ಭಾವವಿದೆ. ಆದರೆ, ನಮ್ಮ ನೆಲದಲ್ಲಿ ಮಹಾರಾಣಿ ಎಂದರೇ ತನ್ನ ಪ್ರಜೆಗಳ ರಕ್ಷಣೆಗಾಗಿ ಕಚ್ಚೆ ಕಟ್ಟಿಕೊಂಡು ಕತ್ತಿ, ಗುರಾಣಿ ಹಿಡಿದು ಧೈರ್ಯದಿಂದ ಹೋರಾಡಿದ ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ರಾಣಿ ಅಬ್ಬಕ್ಕನಂತ ವೀರ ಮಹಿಳೆಯರು ನೆನಪಾಗುತ್ತಾರೆ ಎಂದು ಖ್ಯಾತ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರು.