ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ10ನೇ ತರಗತಿ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾದ ಸಂಗತಿ. ನಿರಂತರ ಪರಿಶ್ರಮ, ಸರಿಯಾದ ವೇಳಾಪಟ್ಟಿ, ಪರಿಣಾಮಕಾರಿ ಅಧ್ಯಯನ ಮಾಡಿ ಸಕಾರಾತ್ಮಕ ಮನೋಭಾವನೆಯಿಂದ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಸ್ವಪ್ನಾ ಜೋಶಿ ಅಭಿಪ್ರಾಯಪಟ್ಟರು.