ಕೊಟ್ಟ ಮಾತು ನಾವಾಗಲಿ, ಪಕ್ಷವಾಗಲಿ ಹಿಂತೆಗೆಯಲ್ಲಬೆಳಗಾವಿ: ಜನಪ್ರತಿನಿಧಿಗಳಾದವರಿಗೆ ಪ್ರಾಮಾಣಿಕತೆ ಮುಖ್ಯ. ಸಂದರ್ಭಕ್ಕೆ ತಕ್ಕಂತೆ ಮಾತು ಬದಲಾಯಿಸುವವರನ್ನು ಜನರು ನಂಬುವುದಿಲ್ಲ. ನಾವಾಗಲಿ, ನಮ್ಮ ಪಾರ್ಟಿಯಾಗಲಿ ಜನರಿಗೆ ಕೊಟ್ಟ ಮಾತನ್ನು ಎಂದೂ ಹಿಂತೆಗೆಯುವುದಿಲ್ಲ. ಹಾಗಾಗಿಯೇ ಗಳಿಸಿಕೊಂಡಿರುವ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.