ಶಿವಯೋಗ, ಶಿವರಾತ್ರಿ, ಶಿವಯೋಗಿಯ ಸಂಗಮವೇ ಅಥಣಿಯ ಗಚ್ಚಿನ ಮಠಶಿವಯೋಗ ಸಾಧನೆಯ ಜಂಗಮ ಜ್ಯೋತಿ ಎನಿಸಿಕೊಂಡಿರುವ ಅಥಣಿಯ ಮುರುಘೇಂದ್ರ ಶಿವಯೋಗಿಗಳು ಮಠ ಬಿಡಲಿಲ್ಲ, ಪೀಠ ಏರಲಿಲ್ಲ, ದಾಸೋಹ ಬಿಡಲಿಲ್ಲ, ಕಾಸು ಮುಟ್ಟಲಿಲ್ಲ, ಸದಾ ಭಕ್ತರೊಂದಿಗೆ ಇದ್ದು ಬಸವ ತತ್ವ ಪ್ರಸಾರ ಮಾಡಿ ನಾಡಿಗೆ ಬೆಳಕಾದವರು. ಶಿವಯೋಗ, ಶಿವರಾತ್ರಿ, ಶಿವಯೋಗಿಯ ಸಂಗಮವೇ ಅಥಣಿಯ ಗಚ್ಚಿನ ಮಠವಾಗಿದೆ ಎಂದು ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.