ನಗರಸಭೆ ಸ್ವತ್ತು ರಕ್ಷಿಸಿಕೊಳ್ಳಿ: ಅಧಿಕಾರಿಗಳಿಗೆ ಸಂಘಟನೆ ತಾಕೀತುದೊಡ್ಡಬಳ್ಳಾಪುರ: ನಗರಸಭೆಗೆ ಸೇರಿರುವ ಸರ್ವೆ ನಂ.112ರ 20 ಎಕರೆ ಜಮೀನು, ಪುರಸಭೆ (ಹಾಲಿ ನಗರಸಭೆ) ಎಂದು ದಾಖಲೆಗಳಲ್ಲಿ ನಮೂದಾಗಿದ್ದು ಕೂಡಲೇ ಈ ಸ್ವತ್ತನ್ನು ನಗರಸಭೆ ರಕ್ಷಿಸಿಕೊಳ್ಳಬೇಕಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.