ಜಾತಿ ಗಣತಿಯಿಂದಾಗಿ ಹಲವರಿಗೆ ಗೃಹಜ್ಯೋತಿ ಶಾಕ್!ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ (ಜಾತಿಗಣತಿ) ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸದಲ್ಲಿ ಬೆಸ್ಕಾಂ ಮೀಟರ್ ರೀಡರ್‌ಗಳು ತಲ್ಲೀನರಾಗಿದ್ದ ಪರಿಣಾಮ ಆಗಸ್ಟ್‌ನಲ್ಲಿ ತಡವಾಗಿ ಮೀಟರ್ ರೀಡಿಂಗ್ ನಡೆದಿದ್ದು, ಬಿಲ್‌ನಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿ ಹಲವು ಗ್ರಾಹಕರಿಗೆ ‘ಗೃಹಜ್ಯೋತಿ’ ಪ್ರಯೋಜನ ಸಿಗದಂತಾಗಿದೆ.