ದೇಗುಲದ ಹಣ ದೇಗುಲಕ್ಕೇ ಬಳಕೆ: ಸರ್ಕಾರದ ಬೋರ್ಡ್ಮುಜರಾಯಿ ಇಲಾಖೆಯಡಿಯ ದೇವಸ್ಥಾನಗಳ ಆದಾಯವನ್ನು ಮುಸಲ್ಮಾನ, ಕ್ರಿಶ್ಚಿಯನ್ನರಿಗೆ ಕೊಡಲಾಗುತ್ತಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ಅಪಪ್ರಚಾರ ತಡೆದು ಜನತೆಗೆ ನಿಜಾಂಶ ತಿಳಿಸಲು ನಿರ್ಧರಿಸಿರುವ ಸರ್ಕಾರ ದೇವಸ್ಥಾನಗಳಲ್ಲಿ ‘ಈ ದೇವಸ್ಥಾನದ ಆದಾಯ ದೇವಸ್ಥಾನಕ್ಕೇ ಬಳಕೆಯಾಗುತ್ತಿದೆ’ ಎಂದು ಫಲಕ ಹಾಕಲು ಮುಂದಾಗಿದೆ.