ಮರುಮೌಲ್ಯಮಾಪನ: ಎಸ್ಸೆಸ್ಸೆಲ್ಸಿಯಲ್ಲಿ ಮಲ್ಲಸಂದ್ರ ವಿದ್ಯಾರ್ಥಿನಿಗೆ 625ಕ್ಕೆ 625ಮಲ್ಲಸಂದ್ರದ ಬಿ.ಎನ್.ಆರ್ ಶಾಲೆಯ ವಿದ್ಯಾರ್ಥಿನಿ ಭಾವನ ಟಿ.ಎಸ್. ಅವರು ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಮೊದಲು 625ಕ್ಕೆ 620 ಅಂಕಗಳ ಪಡೆದಿದ್ದರು. ಆದರೆ, ಮತ್ತೆ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದು ಈ ಸಾಧನೆಗೈದ ರಾಜ್ಯದ ಎರಡನೇ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.