ಪ್ರಜ್ವಲ್ ಪ್ರಕರಣ: ಹೋರಾಟದ ನಡಿಗೆ ಹಾಸನದ ಕಡೆಗೆದೊಡ್ಡಬಳ್ಳಾಪುರ: ಹಾಸನದ ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣನಿಂದ ನಡೆದಿರುವ ವಿಕೃತ ಲೈಂಗಿಕ ಹಗರಣವನ್ನು ವಿರೋಧಿಸಿ ಮೇ 30ರಂದು ನಡೆಯಲಿರುವ ''''ಹೋರಾಟದ ನಡಿಗೆ ಹಾಸನದ ಕಡೆಗೆ'''' ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ತಾಲೂಕಿನ ಜನಪರ ಸಂಘಟನೆಗಳಿಂದ ನೂರಾರು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ಸಂಚಾಲಕ ಆರ್.ಚಂದ್ರತೇಜಸ್ವಿ ಹೇಳಿದರು.