ಕೇರಳ ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಮುಖಂಡ ಸಾವುದಾಬಸ್ಪೇಟೆ: ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಕೇರಳಕ್ಕೆ ತೆರಳಿದ್ದಾಗ ದೋಣಿ ಏರುವಾಗ ಕಾಲುಜಾರಿ ಬಿದ್ದು ಸೋಂಪುರ ಹೋಬಳಿಯ ಮಾರಗೊಂಡನಹಳ್ಳಿ ಗ್ರಾಮದ ನಿವಾಸಿ, ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಎಂ.ಕೆ.ಬಾಲಕೃಷ್ಣ (48) ಮೃತಪಟ್ಟಿದ್ದಾರೆ. ಇವರು ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಕುಟುಂಬದ ಜೊತೆ ನೆಲೆಸಿದ್ದರು.