ಭೀಮನ ಅಮಾವಾಸ್ಯೆಗೆ ಚನ್ನಪಟ್ಟಣದ ಗೌಡಗೆರೆಯಲ್ಲಿ ಸಿದ್ಧತೆಭೀಮನ ಅಮಾವಾಸ್ಯೆ ಪ್ರಯುಕ್ತ ಆ.4ರಂದು ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ, ರಥೋತ್ಸವ ಏರ್ಪಡಿಸಲಾಗಿದ್ದು, ೨೫ ಅಡಿ ಎತ್ತರದ ಹೊಸ ತೇರು ದೇವಿಗೆ ಸಮರ್ಪಣೆ, ವಸ್ತು ಸಂಗ್ರಹಾಲಯ, ದಾಸೋಹ ಭವನ ಉದ್ಘಾಟಿಸಲಾಗುವುದು ಎಂದು ಮಲ್ಲೇಶ್ ಗುರೂಜಿ ತಿಳಿಸಿದರು. ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.