ಚನ್ನಪಟ್ಟಣ ಉಪಚುನಾವಣೆಗೆ ಸಿಪಿವೈ ಸ್ಪರ್ಧೆಗೆ ಸಮಾನ ಮನಸ್ಕರ ವೇದಿಕೆ ಬೆಂಬಲಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೇ ಸ್ಪರ್ಧಿಸಬೇಕು ಎಂಬ ನಿಟ್ಟಿನಲ್ಲಿ ನಮ್ಮ ಶಾಸಕ- ನಮ್ಮ ಹಕ್ಕು ಹೆಸರಿನಲ್ಲಿ ಆ.೧೧ರಂದು ಯೋಗೇಶ್ವರ್ ಪರ ಜನಾಭಿಪ್ರಾಯ ಸಭೆ ಆಯೋಜಿಸಲು ಸಮಾನ ಮನಸ್ಕರ ವೇದಿಕೆ ಮುಂದಾಗಿದೆ. ಚನ್ನಪಟ್ಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿದರು.