ಧರ್ಮ-ಅಧರ್ಮಗಳ ನಡುವಿನ ಚುನಾವಣೆ: ಮುನಿಯಪ್ಪವಿಜಯಪುರ: ದೇಶದಲ್ಲಿ ಧರ್ಮ-ಅಧರ್ಮಗಳ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದೆ. ಒಂದು ಕಡೆ ಕಾರ್ಪೋರೇಟ್ ಕಂಪನಿಗಳನ್ನು ಉದ್ಧರಿಸುವ ಸರ್ಕಾರವಿದ್ದರೆ, ಮತ್ತೊಂದೆಡೆ ಸಮಾಜದಲ್ಲಿನ ಎಲ್ಲಾ ಜಾತಿ ವರ್ಗಗಳನ್ನು ಸಮಾನತೆಯಿಂದ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎನ್ನುವ ಇಂಡಿಯಾ ಮೈತ್ರಿ ಕೂಟ ಸೆಣಸಾಡುತ್ತಿದ್ದು, ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.