ಒಣಗಿದ ಮರದ ರೆಂಬೆ-ಕೊಂಬೆ ತೆರವಿಗೆ ದೂರು ಸಲ್ಲಿಸಿ: ಪಾಲಿಕೆನಗರದಲ್ಲಿ ರಸ್ತೆ ಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿದ ಮರ, ರೆಂಬೆ ಕೊಂಬೆ ಬಿಬಿಎಂಪಿಯ ಅರಣ್ಯ ವಿಭಾಗದ ವತಿಯಿಂದ ತೆರವುಗೊಳಿಸಲಾಗುತ್ತಿದೆ.ಸಾರ್ವಜನಿಕರು ನಗರ ವ್ಯಾಪ್ತಿಯಲ್ಲಿ ಒಣಗಿದ ಮರಗಳು ಹಾಗೂ ಒಣಗಿದ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದಲ್ಲಿ ಬಿಬಿಎಂಪಿಯ ಅರಣ್ಯ ಅಧಿಕಾರಿಗಳ ದೂರುವಾಣಿಯ ವಾಟ್ಸ್ ಅಪ್‌ಗೆ ಜಿಪಿಎಸ್ ಸಹಿತ ಫೋಟೋ ಲಗತ್ತಿಸಿ ಮಾಹಿತಿ ನೀಡಬಹುದು.