ಹಿಂದಿನ ಸಿಡಿಪಿಓಗೆ ಆದ ಗತಿ ನಿಮಗೂ ಆಗುತ್ತೆ: ಶಾಸಕ ಎಚ್ಚರಿಕೆಹಿಂದಿನ ಸಿಡಿಪಿಓ ನಾಗೇಶ್ ಅವರಿಗೆ ಬಂದ ಸ್ಥಿತಿ ನಿಮಗೂ ಆಗುತ್ತೆ ಎಂದು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಎಚ್ಚರಿಸಿದ ಘಟನೆ ಜರುಗಿತು. ಸಭೆಯಲ್ಲಿ ಹೊಸ ಹಂಪಾಪುರ ಲಿಂಗರಾಜು, ಶಂಕನಪುರ ಲಿಂಗರಾಜು , ದಿಲೀಪ್ ಸಿದ್ದಪ್ಪಾಜಿ ಇನ್ನಿತರು ಮಾತನಾಡಿ, ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ. ಮೊಟ್ಟೆಗಳನ್ನು ಬೇಯಿಸಿ ನಾಲ್ಕು ಭಾಗ ಮತ್ತು ಎರಡು ಭಾಗ ಮಾಡಿ ಕೆಲವು ಕಡೆಗಳಲ್ಲಿ ನೀಡಲಾಗುತ್ತಿದೆ. ಬಾಣಂತಿಯರಿಗೆ ನೀಡುವ ಆಹಾರದಲ್ಲಿ ಕಳಪೆ, ಹಾಗೂ ಹುಳು ಮಿಶ್ರಿತ ಆಹಾರ ವಿತರಿಸಲಾಗುತ್ತಿದೆ. ಕಾಳುಗಳು ಸಹಾ ಕಳಪೆ ಗುಣಮಟ್ಟದ್ದಾಗಿದೆ. ಆ ಕಾಳುಗಳಿಗೆ ಮಣಿಯನ್ನು ಪೊಣಿಸಬಹುದು. ಅಷ್ಟರ ಮಟ್ಟಿಗೆ ಕಾಳುಗಳು ಕಳಪೆಯಾಗಿದ್ದು, ಅಧಿಕಾರಿಗಳು ಪರಿಶೀಲಿಸಬೇಕು, ಕೆಲವು ಕಡೆ ಹುಳು ಮಿಶ್ರಿತ ಆಹಾರ ಸಹಾ ಪೂರೈಸಲಾಗುತ್ತಿದ್ದು ಗಮನ ಹರಿಸಬೇಕು ಎಂದರು.