ನಿವೃತ್ತ ಯೋಧ ರವೀಂದ್ರರಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತಬೀದರ್ ಔರಾದ್ ಹೆದ್ದಾರಿಯಲ್ಲಿರುವ ಧರಿ ಹನುಮಾನ ಕ್ಷೇತ್ರದಿಂದ ತೆರೆದ ವಾಹನದಲ್ಲಿ ಯೋಧ ರವೀಂದ್ರ ಅವರನ್ನು ಪತ್ನಿ ಅಶ್ವಿನಿ ಜೊತೆ ಸಂತಪೂರ ಮಾರ್ಗವಾಗಿ ಜೀರ್ಗಾ (ಬಿ) ಗ್ರಾಮದವರೆಗೆ ಮೆರವಣಿಗೆ ಮಾಡಿ ಬರ ಮಾಡಿಕೊಳ್ಳಲಾಯಿತು. ಗ್ರಾಮದ ಯುವಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು, ಜಯ ಘೋಷಗಳ ಮೂಲಕ ಬೈಕ್ ರ‍್ಯಾಲಿ ನಡೆಸಿದರು.