‘ಸುಗುರೆ’ ನಾಟಕದ ಹಿಂದೆ ‘ಕೈ’ವಾಡ; ಶೀಘ್ರ ಬಹಿರಂಗ: ಶಾಸಕ ಶರಣು ಸಲಗರ ಗುರುತರ ಆರೋಪನಾನು ಐದಾರು ಕೋಟಿ ರುಪಾಯಿ ಸಾಲ ಬಾಕಿ ಕೊಡುವುದಿದೆ, ಮಾನಸಿಕವಾಗಿ ನೊಂದಿದ್ದೇನೆ. ಎಂದೆಲ್ಲ ನನ್ನ ವಿರುದ್ಧ ಪತ್ರ ಬರೆದಿಟ್ಟು ನಾಪತ್ತೆಯ ನಾಟಕವಾಡಿದ್ದಾರೆ ಎಂದು ಇತ್ತೀಚೆಗೆ ನಾಪತ್ತೆಯಾಗಿ ಪೊಲೀಸರಿಗೆ ಹೈದ್ರಾಬಾದ್ನಲ್ಲಿ ಸಿಕ್ಕಿರುವ ಉದ್ಯಮಿ ಸಂಜೀವಕುಮಾರ ಸುಗುರೆ ವಿರುದ್ಧ ಶಾಸಕ ಶರಣು ಸಲಗರ ಕಿಡಿಕಾರಿದರು.