ಗುಂಡ್ಲುಪೇಟೇಲಿ ಉಪ್ಪಾರ ಭವನಕ್ಕೆ ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್ ಭೂಮಿ ಪೂಜೆಪಟ್ಟಣದಲ್ಲಿ ₹೭ ಕೋಟಿ ವೆಚ್ಚದಲ್ಲಿ ಭಗೀರಥ ಉಪ್ಪಾರ ಸಮುದಾಯ ಭವನಕ್ಕೆ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಜೊತೆಗೂಡಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.