ಪೌರಕಾರ್ಮಿಕರ ಕಾಯಂ ಮಾಡಲು ಗಮನ ಸೆಳೆದಿದ್ದಕ್ಕೆ ಸ್ಪಂದನೆನಾನು ಸದನದಲ್ಲಿ ಕೊಳ್ಳೇಗಾಲ ನಗರ ಸಭೆಯಲ್ಲಿ ಕೆಲ ಪೌರ ಕಾರ್ಮಿಕರನ್ನು ಕಾಯಂ ಮಾಡಿ ಅವರಿಗೆ ನೇರ ನೇಮಕಾತಿಗೆ ಅನುಮತಿ ನೀಡಬೇಕೆಂದು ಪ್ರಶ್ನಿಸಿದ್ದೆ. ಸರ್ಕಾರ ಸ್ಪಂದಿಸಿ ರಾಜ್ಯದ ಎಲ್ಲಾ ನಗರ, ಪುರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಕೆಯೂ ಸೇರಿದಂತೆ ೨೧೨೭ ಮಂದಿಗೆ ನೇರ ನೇಮಕಾತಿಗೆ ಆದೇಶ ನೀಡಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.