ಗಣಪತಿ ದೇವಾಲಯದಲ್ಲಿ ಗೌರಮ್ಮ ಮೂರ್ತಿ ಸ್ಥಾಪನೆಪಟ್ಟಣದ ಗಣಪತಿ ದೇವಾಲಯದಲ್ಲಿ ಪ್ರಥಮಬಾರಿಗೆ ಗೌರಮ್ಮ ಮೂರ್ತಿಯನ್ನು ತಲಕಾಡಿನ ಕಾವೇರಿ ನದಿ ತೀರದಲ್ಲಿ ಮರಳಿನಲ್ಲಿ ತಯಾರಿಸಿ ತಂದು ಪ್ರತಿಷ್ಠಾಪಿಸಲಾಗಿದೆ. ಸಂಕಷ್ಟಹರ ಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರಥಮ ಬಾರಿಗೆ ಕಾವೇರಿ ನದಿಯಿಂದ ಮರಳು ಗೌರಮ್ಮನನ್ನು 8 ಗಂಟೆಗೆ ಪ್ರತಿಷ್ಠಾಪಿಸಿದ ಬಳಿಕ ಗೌರಿ ಮೂರ್ತಿಗೆ ವಿಧಿ, ವಿಧಾನಗಳೊಂದಿಗೆ ಪೂಜೆ ಮಾಡಲಾಯಿತು. ಮಹಾ ಮಂಗಳಾರತಿ ಬಳಿಕ ಗೌರಿಗೆ ಬಾಗಿನ ಅರ್ಪಣೆ, ಭಕ್ತಾಧಿಗಳಿಂದ ಪೂಜಾ ಕಾರ್ಯ ನಡೆಯಿತು.