ಹೊಂಗನೂರು ಗ್ರಾಪಂ ಕಟ್ಟಡ ಅಶುಚಿತ್ವ, ಅನೈತಿಕ ಚಟುವಟಿಕೆ ತಾಣಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ೧೮೫೮ ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಹೊಂಗನೂರು ಬೆಲ್ಲವತ್ತ, ಮುರಟಿಪಾಳ್ಯ, ಶನಿವಾರಮುಂಟಿ ಗ್ರಾಮಗಳನ್ನು ಹೊಂಗನೂರು ಪಂಚಾಯಿತಿ ಒಳಗೊಂಡಿದೆ. ಗ್ರಾಮದಿಂದ ಕಳ್ಳೀಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗ್ರಾಮದ ಹೊರ ಭಾಗದಲ್ಲಿ ಪಂಚಾಯಿತಿ ಕಟ್ಟಡವಿದೆ. ಆದರೆ ಈ ಕಟ್ಟಡ ಸುತ್ತಲೂ ಕಳೆ ಸಸ್ಯಗಳು ಕಾಡಿನಂತೆ ಹಬ್ಬಿವೆ. ಇದರ ಹಂಬುಗಳು ಕಿಟಕಿ ಒಳಗಿಂದ ತೂರಿ ಕಚೇರಿ ಒಳಗೂ ಹಬ್ಬಿದೆ. ಕಟ್ಟಡದ ಹಿಂಭಾಗದಲ್ಲಿ ೨ ಶೌಚಗೃಹವಿದೆ. ಆದರೆ ಇದರ ನಿರ್ವಹಣೆಯಿಲ್ಲದೆ ಇದು ಗಬ್ಬು ನಾರುತ್ತಿದೆ. ಅಲ್ಲದೆ ಇಲ್ಲಿಗೆ ನೀರಿನ ಸಂಪರ್ಕವೂ ಇಲ್ಲ.