ಕಿಶೋರಿಯರ ಆರೋಗ್ಯ ಕಾಳಜಿಗೆ ಪ್ರಾಣಸಖಿ ಜಾರಿಶಿಕ್ಷಣ ಸಂಸ್ಥೆಗಳಲ್ಲಿ ಹದಿ ಹರೆಯದ ಹೆಣ್ಣು ಮಕ್ಕಳ ಸಮಗ್ರ ಆರೋಗ್ಯ, ಜಾಗೃತಿ, ಮಾರ್ಗದರ್ಶನ, ಮೂಲ ಸೌಕರ್ಯ ಒದಗಿಸುವ ಉದ್ದೇಶದೊಂದಿಗೆ ಜಿಲ್ಲಾಡಳಿತವು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ), ಬ್ಲಾಕ್‌ಚೇನ್ ಫಾರ್ ಇಂಪ್ಯಾಕ್ಟ್ ಹಾಗೂ ಫಿಯಾ ಫೌಂಡೇಶನ್ ನೆರವಿನೊಂದಿಗೆ ಇಂಡಿಯಾ ಹೆಲ್ತ್ ಅಂಡ್ ಕ್ಲೈಮೇಟ್ ರೆಸಿಲಿಯನ್ಸ್ ಫೆಲೋಶಿಪ್ (ಐಎಚ್‌ಸಿಆರ್‌ಎಫ್) ಪ್ರಾಜೆಕ್ಟ್ ಅಡಿ ರೂಪಿಸಿರುವ ಪ್ರಾಣಸಖಿ ಯೋಜನೆ ಕುರಿತ ವಿಶೇಷ ಕಾರ್ಯಾಗಾರ ನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಶನಿವಾರ ನಡೆಯಿತು.