ಮನುಕುಲದ ಸೇವೆಗೆ ರಾಜೇಂದ್ರ ಶ್ರೀಗಳು ಪ್ರೇರಣೆ: ಸಿದ್ದಮಲ್ಲಪ್ಪಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿದ್ದು, ಮನುಕುಲದ ಸೇವೆಗೆ ಪ್ರೇರಣೆಯಾಗಿದ್ದಾರೆ ಎಂದು ಬದನಗುಪ್ಪೆ ಪ್ರೌಢಶಾಲೆ ಅಧ್ಯಾಪಕ ಸಿದ್ದಮಲ್ಲಪ್ಪ ಅಭಿಪ್ರಾಯಪಟ್ಟರು. ಯಳಂದೂರಿನಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.