ಕರುಗಳ ಸಮರ್ಪಕ ನಿರ್ವಹಣೆಯಿಂದ ಉತ್ತಮ ರಾಸು ಹೊಂದಲು ಸಾಧ್ಯ: ಸದಾಶಿವಮೂರ್ತಿರೈತರು ಹೈನುಗಾರಿಕೆಯ ಜೊತೆಯಲ್ಲಿಯೇ ಉತ್ತಮವಾಗಿ ಕರುಗಳನ್ನು ಪಾಲನೆ ಪೋಷಣೆ ಮಾಡಿದರೆ, ಮುಂದೆ ಗುಣಮಟ್ಟದ ಹಾಲು ನೀಡುವ ಹಸುವನ್ನು ಹೊಂದಲು ಸಾಧ್ಯ ಎಂದು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ತಿಳಿಸಿದರು. ಚಾಮರಾಜನಗರದಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ ಮತ್ತು ಉತ್ತಮ ಕರುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.