ಸರ್ಕಾರಿ ಜಾಗ ಅತಿಕ್ರಮಿಸಿಕೊಂಡು ಅನಧಿಕೃತ ದಾಖಲೆ ಸೃಷ್ಟಿಪಟ್ಟಣದ ವಾಸವಿ ವಿದ್ಯಾಸಂಸ್ಥೆಯವರು ಸರ್ಕಾರಿ ಜಾಗವಾದ 80 ಸೆಂಟ್ ಸಾರ್ವಜನಿಕ ಸ್ಮಶಾನ ಜಾಗವನ್ನು ಅತಿಕ್ರಮಿಸಿಕೊಂಡು ಅನಧಿಕೃತ ದಾಖಲೆ ಸೃಷ್ಟಿಸಿಕೊಂಡಿದ್ದಾರೆ, ಈ ಹಿನ್ನೆಲೆ ಅತಿಕ್ರಮಿತ 80ಸೆಂಟ್ ಜಾಗ ತೆರವುಗೊಳಿಸಿ, ಟ್ರಂಚ್ ತೆಗೆಸುವ ಮೂಲಕ ಈ ಜಾಗ ಸಂರಕ್ಷಿಸಬೇಕು, ಇಲ್ಲದಿದ್ದರೆ ಸರ್ಕಾರಿ ಆಸ್ತಿ ಭೂಗಳ್ಳರಿಂದ ಉಳಿಸಿ ಎಂಬ ನಿಟ್ಟಿನಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಣಗಳ್ಳಿ ದಶರಥ್ ತಿಳಿಸಿದ್ದಾರೆ.