ಸಮಸ್ಯೆಗಳಿದ್ದರೆ ಫೇಸ್‌ಬುಕ್, ವಾಟ್ಸಾಪ್‌ಗೆ ಹಾಕಿಪುರಸಭೆ ವ್ಯಾಪ್ತಿಯಲ್ಲಿ ಕಸ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆ ಎದುರಾದರೆ ಇನ್ಮುಂದೆ ಪುರಸಭೆ ಕಚೇರಿಗೆ ನಾಗರಿಕರು ಅಲೆಯುವುದನ್ನು ತಪ್ಪಿಸಲು ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣ ಫೇಸ್ ಬುಕ್ ಹಾಗೂ ವಾಟ್ಸಾಪ್‌ಗೆ ಮಾಹಿತಿ ನೀಡಿದರೆ ಸಮಸ್ಯೆಗೆ ಸ್ಪಂದಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.