ರೈತರು ಮಣ್ಣಿನ ಆರೋಗ್ಯ ವೃದ್ದಿಸಲು ಮುಂದಾಗಲಿ: ಸಾವಯವ ಕೃಷಿ ತಜ್ಞ ಎಚ್.ಆರ್.ಮಂಜುನಾಥ್ ಸಲಹೆಕೃಷಿ ನೀತಿ ಮತ್ತು ಕೃಷಿ ಶೈಲಿ ಬದಲಾವಣೆಯಿಂದ ಮಾತ್ರ ರೈತರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಬಹುದು. ಕೃಷಿ ಸಾಲ ನೀತಿಯಲ್ಲಿ ಬದಲಾವಣೆ, ಸಬ್ಸಿಡಿಯನ್ನು ನೇರವಾಗಿ ರೈತರಿಗೆ ನೀಡುವುದು, ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡದೇ, ಕಾರ್ಮಿಕರ ಅವಲಂಬನೆ ಕಡಿಮೆ ಮಾಡುವ, ಸಣ್ಣ ಯಂತ್ರಗಳ ಮೂಲಕ ಸ್ವತಃ ಕಾರ್ಯನಿರ್ವಹಿಸುವಂತಹ ಯೋಜನೆ ಅಗತ್ಯವಿದೆ.