‘ಲೋಕ’ ಚುನಾವಣೆಗೆ ನೆಲಮಂಗಲ ತಾಲೂಕಿನಾದ್ಯಂತ ಸಕಲ ಸಿದ್ಧತೆತಾಲೂಕಿನ ಅಡೇಪೇಟೆ ಮತಗಟ್ಟೆಯಲ್ಲಿ ಯುವ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಹಂಚೀಪುರ, ಸೋಂಪುರ-3, ಬಸವನಹಳ್ಳಿ, ಸೋಲೂರು-4, ಹೊನ್ನೇನಹಳ್ಳಿ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ನೆಲಮಂಗಲ ನಗರದ ಸರಕಾರಿ ಪಿಯು ಕಾಲೇಜಿನಲ್ಲಿ ವಿಕಲಚೇತನರಿಗಾಗಿ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಶಿವಗಂಗೆಯಲ್ಲಿ ಸಾಂಸ್ಕೃತಿಕ ವಿಷಯಾಧಾರಿತವಾಗಿ ಸುಗ್ಗಿ ಹಬ್ಬ, ಎತ್ತಿನ ಬಂಡಿಯ ಆಕರ್ಷಕ ಮತಗಟ್ಟೆಯನ್ನು ತೆರೆಯಲಾಗಿದೆ.