ಕಂದಾಯ ಕಟ್ಟಿ ಕಡೂರು ಅಭಿವೃದ್ಧಿಗೆ ಕೈಜೋಡಿಸಿಪಟ್ಟಣದ ಪುರಸಭೆಯ 23 ವಾರ್ಡ್‍ಗಳಲ್ಲಿ ವಾಣಿಜ್ಯ ಮಳಿಗೆ, ಹೋಟೆಲ್, ಅಂಗಡಿ, ಮಹಲ್‍ಗಳ ಪರವಾನಗಿ ನವೀಕರಣ ಮತ್ತು ಕಂದಾಯ ವಸೂಲಿಗೆ ವಿಶೇಷ ತಂಡಗಳನ್ನು ರಚಿಸಿ ಬೃಹತ್ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ. ಸಾರ್ವಜನಿಕರು ಅಂಗಡಿ, ಹೋಟೆಲ್ ಮಾಲೀಕರು, ವಾಣಿಜ್ಯೋದ್ಯಮಿಗಳು ಹಾಗೂ ವ್ಯಾಪಾರಿಗಳು ಸಕಾಲದಲ್ಲಿ ಪುರಸಭೆಗೆ ಕಂದಾಯ ಕಟ್ಟುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಬೇಕು. ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.