ಪರಿಸರ ಸಂರಕ್ಷಿಸದಿದ್ದರೆ ಜೀವರಾಶಿಗೆ ಅಪಾಯಪರಿಸರ ಉಳಿಸಿದರೆ ಮಾತ್ರ ಅಂತರ್ಜಲ, ಶುದ್ಧ ಆಮ್ಲಜನಕ ಎಲ್ಲವೂ ಸಿಗಲಿದ್ದು, ಈ ನಿಟ್ಟಿನಲ್ಲಿ ಮರ, ಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಮಳೆ ನೀರನ್ನು ಸಮರ್ಪಕವಾಗಿ ಬಳಸುವಲ್ಲಿ ಎಲ್ಲರೂ ಗಮನಹರಿಸಬೇಕು. ಪರಿಸರ ನಮ್ಮ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ, ಆದರೆ ನಾವು ಪರಿಸರಕ್ಕೆ ಏನನ್ನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಂಡಾಗ ನಿಜ ಅರಿವಾಗಲಿದೆ.