ಸಮಾಜ ಸುಧಾರಣೆಗೆ ಯತ್ನಿಸಿದ ಸರ್ವಜ್ಞಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವನು, ಎಲ್ಲಾ ವಿಚಾರದಲ್ಲೂ ಪಾಂಡಿತ್ಯ ಪಡೆದವರೆಂದು ಅರ್ಥ ಹೆಸರಿನ ಅಂಕಿತ ಬಳಸಿಕೊಂಡು ವಚನಗಳನ್ನು ರಚಿಸಿದ ಸರ್ವಜ್ಞರು, ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಪಂಪ, ರನ್ನ, ಜನ್ನ, ಪೊನ್ನ ಇವರೆಲ್ಲಾ ಸಾಹಿತಿಗಳು ಸಂಸ್ಕೃತ ಅಧ್ಯಯನ ಮಾಡಿದ ಪಂಡಿತರಾದರೆ, ಸರ್ವಜ್ಞರು ಅಪ್ಪಟ ಕನ್ನಡದ ಕವಿ.