ಶಿಡ್ಲಘಟ್ಟ: ಬೀದಿ ನಾಯಿಗಳ ಅರ್ಭಟಕ್ಕಿಲ್ಲ ಕಡಿವಾಣಶಿಡ್ಲಘಟ್ಟ ನಗರದಲ್ಲಿ ಶಾಲಾ, ಕಾಲೇಜಿಗೆ ತೆರಳುವ ಮಕ್ಕಳು, ಮಹಿಳೆಯರು, ಬೆಳಗಿನ ಸಮಯದಲ್ಲಿ ವಾಯು ವಿಹಾರಕ್ಕೆ ಬರುವ ವಯೋ ವೃದ್ಧರು ನಾಯಿಗಳ ಕಾಟಕ್ಕೆ ಭಯಭೀತರಾಗಿದ್ದಾರೆ. ವಿಪರ್ಯಾಸವೆಂದರೆ ಗ್ರಾಮೀಣ ಪ್ರದೇಶಕ್ಕಿಂತ ನಗರದಲ್ಲಿಯೇ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ.