ಜಿಲ್ಲೆಯ ವಿವಿಧೆಡೆ ಸಂಭ್ರಮದ ದೀಪಾವಳಿ ಆಚರಣೆಚಿಕ್ಕಮಗಳೂರು, ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಸಾಂಪ್ರದಾಯಕವಾಗಿ ದೀಪಾವಳಿ ಆಚರಿಸಲಾಯಿತು. ಒಂದೆಡೆ ಅಂಗಡಿ ಮನೆಗಳಲ್ಲಿ ಲಕ್ಷ್ಮಿಯನ್ನು ಆರಾಧಿಸಿದರೆ, ಮುಂಜಾನೆಯೆ ಅಭ್ಯಂಜನ ಮಾಡಿ ತಮ್ಮ ಪದ್ಧತಿಯಂತೆ ದೇವರನ್ನು ಪೂಜಿಸಿದರು. ನರಸಿಂಹರಾಜಪುರದಲ್ಲಿ ದೀಪಾವಳಿ 2ನೇ ದಿನ ಲಕ್ಷ್ಮಿಪೂಜೆ, ಅಂಗಡಿ ವಾಹನ ಪೂಜೆ ಹಾಗೂ ಚೀನಿಕಾಯಿ ಕಡಬನ್ನು ತಯಾರಿಸಿ ಹಬ್ಬ ಆಚರಿಸಲಾಯಿತು.