ಸಾರ್ಯಗ್ರಾಮದ ಕೂಸ್ಗಲ್ ನಲ್ಲಿ ಗಿರಿ ಹತ್ತಿ ಪೂಜೆ ಸಲ್ಲಿಸಿದ ಗ್ರಾಮಸ್ಥರುನರಸಿಂಹರಾಜಪುರ: ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಸಾರ್ಯ ಗ್ರಾಮದ ಕೂಸ್ಗಲ್ ನಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ದೀಪಾವಳಿಯ ಮಾರನೆ ದಿನ ಭಾನುವಾರ ರಂಗನಾಥಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸಮೀಪದ ಗಿರಿ ಹತ್ತಿ ಅಲ್ಲಿನ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬಂದಿದ್ದಾರೆ.