ಗ್ರಾಮೀಣ ಕರಕುಶಲ ಕಲೆಗಳನ್ನು ಉಳಿಸಿ ಬೆಳೆಸಬೇಕು: ಸುಭಾಷಿಣಿಶೃಂಗೇರಿ, ನಮ್ಮ ಪೂರ್ವಿಕರಿಂದ ತಲೆ ತಲಾಂತರದಿಂದ ಬೆಳೆದು ಬಂದಿರುವ ಗ್ರಾಮೀಣ ಗೃಹಕೈಗಾರಿಕೆ, ಕರಕುಶಲ ಕೈಗಾರಿಕೆ ಕಲೆ ಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮೆಣಸೆ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಹೇಳಿದರು.