ಮಳೆಯ ಕಣ್ಣಾಮುಚ್ಚಲೆ ಆಟ: ರೈತರಿಗೆ ಪ್ರಾಣ ಸಂಕಟಚಿಕ್ಕಮಗಳೂರು, ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಪಂಚನದಿಗಳ ತವರೂರು ಸೇರಿದಂತೆ ಜಿಲ್ಲೆಯ 8 ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದವು. ಆದರೆ, ಈ ಬಾರಿ ಹಿಂಗಾರು ಹಾಗೂ ಈಗಾಗಲೇ ಒಂದು ತಿಂಗಳು ಪೂರೈಸಿರುವ ಮುಂಗಾರು ಮಳೆಯ ಚಿತ್ರಣ ನೋಡಿದರೆ ಮಳೆಯ ಕಣ್ಣಾ ಮುಚ್ಚಲೆ ಆಟ ರೈತರ ಪಾಲಿಗೆ ಸಂಕಟವಾಗಿದೆ.