ಗ್ರಾಮಸ್ಥರಿಂದ ಪ್ರತಿಭಟನೆ : ಚುನಾವಣಾ ಬಹಿಷ್ಕಾರತಾಲೂಕಿನ ಮಡಬೂರು ಗ್ರಾಮದ ಕುಪ್ಪೂರು, ಬಟ್ಟೆ ಕೊಡಿಗೆ, ಕೇಸಕ್ಕಿ ಹಾಗೂ ಹೊಸಮನೆ ಗ್ರಾಮಸ್ಥರು ಬುಧವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸಂಪರ್ಕ ರಸ್ತೆ ರಿಪೇರಿ ಮಾಡಿಸಿಲ್ಲ, ಕಾಲು ಸೇತುವೆ ದುರಸ್ತಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದರು.