ಗುಡಿಸಲು ಸುಟ್ಟಿದ್ದನ್ನು ಖಂಡಿಸಿ, ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತರೀಕೆರೆ ತಾಲೂಕು ಶಾಖೆಯಿಂದ ಗುರುವಾರ, ತರೀಕೆರೆ ತಾಲೂಕು ಕಸಬಾ ಹೋಬಳಿ ಎಚ್.ರಂಗಾಪುರ ಗ್ರಾಮದ ಸ.ನಂ.14ರಲ್ಲಿ ಒಟ್ಟು ಸರ್ಕಾರಿ ಜಮೀನಿನ 57.16 ಎಕರೆಯಲ್ಲಿ 15 ಎಕರೆ ಜಾಗದಲ್ಲಿ ನಿವೇಶನ ರಹಿತರು ಹಾಕಿಕೊಂಡಿದ್ದ ಗುಡಿಸಲು ಕಿತ್ತು, ಸುಟ್ಟು ಹಾಕಿ ಒಕ್ಕಲೆಬ್ಬಿಸಿದ್ದನ್ನು ವಿರೋಧಿಸಿ ಮತ್ತು ಸ.ನಂ.12 ರಲ್ಲಿ ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮರ್ಲೆ ಅಣ್ಣಯ್ಯ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಯಿತು