ಭವ್ಯ ಭಾರತದ ಇತಿಹಾಸ ರಾಮಾಯಣವಿಲ್ಲದೇ ಅಪೂರ್ಣ: ಸಿ.ಟಿ. ರವಿಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಮಂತ್ರಿಗಳ ಕರೆಯ ಮೇರೆಗೆ ಸ್ವಚ್ಛ ತೀರ್ಥ ಅಭಿಯಾನದ ಹಿನ್ನೆಲೆಯಲ್ಲಿ ಹಿರೇಮಗಳೂರಿನ ಶ್ರೀ ಕೋದಂಡ ರಾಮಚಂದ್ರ ದೇವಾಲಯದಲ್ಲಿ ಮಂಗಳವಾರ ಬಿಜೆಪಿಯಿಂದ ಸ್ವಚ್ಛತೆ ಹಮ್ಮಿಕೊಳ್ಳಲಾಗಿತ್ತು.ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೆಳಿಗ್ಗೆ ದೇವಾಲಯದ ಹೊರ ವಲಯ ಹಾಗೂ ಆವರಣದೊಳಗೆ ಕಸ ಗುಡಿಸಿ ನೀರು ಹಾಕಿ ಶುಚಿಗೊಳಿಸಿದರು.