ಬೆಳೆ ಸಮೀಕ್ಷೆಯಲ್ಲಿ ತಪ್ಪಾದರೆ ಅಧಿಕಾರಿಗಳೇ ಹೊಣೆಹೊಸದುರ್ಗ: ಹೊಸ ರಾಗಿ ಮಾರುಕಟ್ಟೆಗೆ ಬರುವುದರೊಳಗೆ ಶ್ರೀರಾಂಪುರ ಉಪ ಮಾರುಕಟ್ಟೆಯಲ್ಲಿ ಗೋಡೋನ್ ಹಾಗೂ ವೇ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಬೇಕು. ಎಂಎಸ್‌ಪಿ ದರದಲ್ಲಿ ರಾಗಿ ಖರೀದಿಸಲು ಹೊಸದುರ್ಗದಲ್ಲಿ 2 ಹಾಗೂ ಶ್ರೀರಾಂಪುರದಲ್ಲಿ 2 ನೋಂದಣಿ ಕೇಂದ್ರವನ್ನು ತೆರೆಯಬೇಕು. ಅದಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಸಿದ್ಧತೆಮಾಡಿಕೊಳ್ಳಬೇಕು ಎಂದು ಶಾಸಕ ಬಿಜಿ ಗೋವಿಂದಪ್ಪ ಅವರು ಎಪಿಎಂಸಿ ಕಾರ್ಯದರ್ಶಿಗೆ ತಾಕೀತು ಮಾಡಿದರು.