ಬೊಮ್ಮಕ್ಕನಹಳ್ಳಿಯಲ್ಲಿ ದಂಪತಿ ಹತ್ಯೆ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹನುಮಂತಪ್ಪ (46), ಪತ್ನಿ ತಿಪ್ಪಮ್ಮ (42) ಕೊಲೆಗೀಡಾದವರು. ಗುರುವಾರ ಸಂಜೆ ಜಮೀನಿಗೆ ಹೋದವರು ಮರಳಿ ವಾಪಾಸ್ಸು ಬಂದಿಲ್ಲ. ಹತ್ಯೆಗೆ ಸಂಬಂಧಿಸಿದಂತೆ ಮೃತರ ಪುತ್ರಿ ಹರ್ಷಿತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತನ್ನ ಪತಿ ಮಂಜುನಾಥ್ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾಳೆ.