ಶುಭ ಕಾರ್ಯಕ್ಕೆ ರಕ್ತದಾನ ಮಾಡುವ ಅಭ್ಯಾಸ ಬೆಳಸಿಕೊಳ್ಳಿನಮ್ಮ ಮನೆಗಳಲ್ಲಿ ಏನಾದರೂ ಶುಭ ಕಾರ್ಯವಾದಲ್ಲಿ ನೆನಪಿಗಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳಸಿಕೊಳ್ಳಬೇಕಿದೆ. ಇದರಿಂದ ಒಂದು ಜೀವ ಉಳಿಸಿದ ಪುಣ್ಯ ನಮ್ಮದಾಗುತ್ತದೆ. ವೈದ್ಯಕೀಯ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಜೀವ ಉಳಿಸಲು ರಕ್ತದಾನವೊಂದೇ ಪರ್ಯಾಯ ಮಾರ್ಗವೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.