ವದ್ದೀಕೆರೆ ಸಿದ್ದೇಶ್ವರಸ್ವಾಮಿ ಹುಂಡಿಯಲ್ಲಿ ₹96 ಲಕ್ಷ ಸಂಗ್ರಹತಾಲೂಕಿನ ಇತಿಹಾಸ ಪ್ರಸಿದ್ದ ವದ್ದೀಕೆರೆ ಶ್ರೀ ಕಾಲಭೈರವೇಶ್ವರ ಯಾನೆ ಸಿದ್ದೇಶ್ವರಸ್ವಾಮಿಯ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ₹96,32,630 ಸಂಗ್ರಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹುಂಡಿ ಹಣ ಸಂಗ್ರಹಣೆ ಕಡಿಮೆಯಾಗಿದ್ದು, ಕಳೆದ ಬಾರಿ ಸಿದ್ದೇಶ್ವರ ಸ್ವಾಮಿಯ ಕಾಣಿಕೆ ಕೋಟಿ ದಾಟಿತ್ತು.