866 ಸರ್ಕಾರಿ ಶಾಲೆಗಳಲ್ಲಿ ಗೋ ಹಸಿರು ಕ್ರಾಂತಿ ಕಾರ್ಯಕ್ರಮಜಿಲ್ಲೆಯ 866 ಸರ್ಕಾರಿ ಶಾಲೆಗಳಲ್ಲಿ ಗೋ ಹಸಿರು ಕ್ರಾಂತ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು. ನಗರದ ಡಯಟ್ ವತಿಯಿಂದ ಬಿಆರ್ ಸಿ ಮತ್ತು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಿಗೆ ಗೋ ಹಸಿರು ಕ್ರಾಂತಿ ಕಾರ್ಯಕ್ರಮ ಅನುಷ್ಠಾನ ಸಂಬಂಧ ಆಯೋಜಿಸಿದ್ದ ಗೂಗಲ್ ಸಭೆಯಲ್ಲಿ ಮಾತನಾಡಿದ ಅವರು, ಪರಿಸರವನ್ನು ಮಾಲಿನ್ಯತೆಯಿಂದ ಮುಕ್ತಗೊಳಿಸಿ, ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.